ಚಂಬಲ್ 2019ರ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವನ್ನು ಜೇಕಬ್ ವರ್ಗಿಸ್ ನಿರ್ದೇಶಿಸಿದ್ದಾರೆ. ದಿನೇಶ್ ರಾಜಕುಮಾರ್ ಮತ್ತು ಮ್ಯಾಥ್ಯೂ ವರ್ಗಿಸ್ ತಮ್ಮ ಜೇಕಬ್ ಫಿಲಂಸ್ ಮತ್ತು ಜಡ್ಯನ್ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ಸೋನು ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಕಿಶೋರ್ ಕುಮಾರ್ ಮತ್ತು ಎಲ್ವಿಸ್ ಜೋಸೆಫ್ ಇದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥವನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ಜುಡಾ ಸಂಧಿ, ಛಾಯಾಗ್ರಹಣವನ್ನು ಡಿ.ಸಸಿ ಕುಮಾರ್ ಮತ್ತು ಸಂಕಲನವನ್ನು ಭವನ್ ಶ್ರೀಕುಮಾರ್ ಮಾಡಿದ್ದಾರೆ. ಈ ಚಿತ್ರವು ಡಿ.ಕೆ.ರವಿ ಅವರ ಜೀವನವನ್ನು ಆಧರಿಸಿದೆ. == ಪಾತ್ರವರ್ಗ == ಸುಭಾಷ್ ಪಾತ್ರದಲ್ಲಿ ಸತೀಶ್ ನೀನಾಸಂ ಲಕ್ಷ್ಮಿ ಪಾತ್ರದಲ್ಲಿ ಸೋನು ಗೌಡ ರೋಜರ್ ನಾರಾಯಣ್ ಪವನ್ ಕುಮಾರ್ ಅಚ್ಯುತ್ ಕುಮಾರ್ ಕಿಶೋರ್ ಕುಮಾರ್ ಎಲ್ವಿಸ್ ಜೋಸೆಫ್ ಗಿರಿಜಾ ಲೋಕೇಶ್ ರಮೇಶ್ ಭಟ್ == ಧ್ವನಿಪಥ == ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥಗಳನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ಜುಡಾ ಸಂಧಿ ಸಂಯೋಜಿಸಿದ್ದಾರೆ. ಚಿತ್ರದ ಸಂಗೀತ ಹಕ್ಕುಗಳನ್ನು ಜೀ ಮ್ಯೂಸಿಕ್ ಸಂಸ್ಥೆ ಸ್ವಾಧೀನಪಡಿಸಿಕೊಂಡಿತು. ಎಲ್ಲ ಹಾಡುಗಳು ಜಯಂತ್ ಕಾಯ್ಕಿಣಿ , ಜಿ.ಪಿ.ರಾಜರತ್ನಂ , ಸುನಿ ಅವರಿಂದ ರಚಿತ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಚಂಬಲ್ @ ಐ ಎಮ್ ಡಿ ಬಿ